davanagerereportersguild@gmail.com

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರ ನುಡಿ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಕೇವಲ ಪತ್ರಕರ್ತರಿಗಷ್ಟೇ ಸೀಮಿತವಾಗಿಲ್ಲ‌. ಪತ್ರಕರ್ತರ ಕುಟುಂಬದ ಹಿತ ಕಾಯುವ ಕೆಲಸವನ್ನೂ ಮಾಡಿಕೊಂಡೇ ಬರುತ್ತಿದೆ... ಕೂಟದ ಪದಾಧಿಕಾರಿಗಳು, ಸದಸ್ಯರು, ಹಿರಿಯ ಪತ್ರಕರ್ತರು ಒಂದಾಗಿ ಸಾಕಷ್ಟು ಸಮಾಜಮುಖಿ ಮಾನವೀಯ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಅಸಹಾಯಕರು, ಸಂಕಷ್ಟದಲ್ಲಿದ್ದವರು, ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಕೋರಿ ಬಂದವರಿಗೆ ವರದಿಗಾರರ ಕೂಟವು ಉಚಿತವಾಗಿ ಪತ್ರಿಕಾಗೋಷ್ಠಿಗೆ ಅವಕಾಶ ನೀಡುತ್ತಾ ಬಂದಿದೆ.

ಸ್ಥಳೀಯ ಆಸ್ಪತ್ರೆಗಳು, ವೈದ್ಯರಾಗಿದ್ದರೆ ಕೂಟದ ಪ್ರತಿನಿಧಿಗಳು, ಹಿರಿಯ ಪತ್ರಕರ್ತರು ಮಾತನಾಡಿ, ರಿಯಾಯಿತಿ ಕೊಡಿಸಿದ, ದಾನಿಗಳು, ಉಳ್ಳವರದಿಂದ ಕೈಲಾದ ನೆರವು ಕೊಡಿಸಿದ ನೂರಾರು ನಿದರ್ಶನ ಇದೆ‌. ಕೇವಲ ಪತ್ರಕರ್ತರಿಗಷ್ಟೇ ಅಲ್ಲ, ಮಾನವೀಯ ಕಾರ್ಯಗಳಿಂದಲೂ ವರದಿಗಾರರ ಕೂಟ ಮಾದರಿ ಕೆಲಸಗಳನ್ನು ಮಾಡಿಕೊಂಡೇ ಬರುತ್ತಿದೆ. ಈ ಮೂಲಕ ಯುವ ಪತ್ರಕರ್ತರಿಗೆ ಹಿರಿಯರು ಮೇಲ್ಪಂಕ್ತಿ ಹಾಕಿಕೊಡುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಇಂತಹ ವರದಿಗಾರರ ಕೂಟಕ್ಕೆ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು ಸ್ಪಂದನೆ, ಸಹಕಾರವೂ ಸದಾ ಇರಲಿ ಎಂಬ ಮನವಿ.